ಎಂದೆಂದಿಗೂ ಜನ ಮೆಚ್ಚುವ ಸಿನಿಮಾ`ಎಂದೆಂದೂ ನಿನಗಾಗಿ`
Posted date: 04 Fri, Apr 2014 – 09:09:30 AM

`ಎಂದೆಂದೂ ನಿನಗಾಗಿ` ರಿಲೀಸ್‌ಗೆ ರೆಡಿಯಾಗಿದೆ. ಇದು  ತಮಿಳಿನ `ಎಂಗೆಯುಂ ಎಪ್ಪುದಂ` ಚಿತ್ರದ ಅವತರಣಿಕೆ. ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿ ಮುಗಿಸಿರುವ ನಿರ್ದೇಶಕ ಮಹೇಶ್‌ರಾವ್ ಈ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.  ‘ಪುಟ್ನಂಜ’ ಖ್ಯಾತಿಯ ಎ.ನರಸಿಂಹನ್ ನಿರ್ಮಾಪಕರು. ಚಿತ್ರದ ನಾಯಕ ವಿವೇಕ್ ನರಸಿಂಹನ್ ಅವರ ಪುತ್ರ. ಹಾಗಾಗಿ ಒಳ್ಳೆಯ ಚಿತ್ರದ ಮೂಲಕವೇ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ನರಸಿಂಹನ್. ಚಿತ್ರದಲ್ಲಿ ವಿವೇಕ್‌ಗೆ ಜೋಡಿಯಾಗಿ ದೀಪಾ ಸನ್ನಿಧಿ ಕಾಣಿಸಿಕೊಂಡರೆ, ಅನೀಶ್ ತೇಜಶ್ವರ್‌ಗೆ ಸಿಂಧುಲೋಕನಾಥ್ ಜೋಡಿ. ಹರಿಕೃಷ್ಣ ಸಂಗೀತ ಮೋಡಿ ಮಾಡಿದರೆ, ಜೈ ಆನಂದ್ ಅವರ ಕ್ಯಾಮೆರಾ ಇಲ್ಲಿ ಎಲ್ಲವನ್ನೂ ಅಂದಗೊಳಿಸಿದೆ.ದ ಬಗ್ಗೆ ವಿವೇಕ್ ಭರವಸೆ ಇಟ್ಟುಕೊಂಡಿದ್ದಾರೆ. ಅವರಿಗೆ ಚಿತ್ರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಕಾರಣ, ಒಳ್ಳೆಯ ಚಿತ್ರ ಕನ್ನಡದಲ್ಲಿ ತಯಾರಾಗಿದೆ ಅನ್ನುವುದು. ಮೊದಲ ಚಿತ್ರವಾದ್ದರಿಂದ ಅವರಿಗೆ ಸಹಜವಾಗಿಯೇ ಭಯ ಮತ್ತು ಖುಷಿ ಎರಡೂ ಇದೆಯಂತೆ. ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿದೆ. ಆದರೂ, ಚಿತ್ರವನ್ನು ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯೂ ಇದೆ ಎನ್ನುತ್ತಾರೆ ವಿವೇಕ್.  ಈ ಚಿತ್ರದ ಆರಂಭದಲ್ಲಿ ಕಷ್ಟ  ಅನಿಸಿದ್ದು ನಿಜ. ಹೇಗಪ್ಪಾ, ಕ್ಯಾಮೆರಾ ಮುಂದೆ ನಿಂತು ನಟಿಸೋದು ಎಂಬ ಫೀಲ್ ಇತ್ತು. ಆದರೆ, ನಿರ್ದೇಶಕರ ಸಹಕಾರ, ಚಿತ್ರತಂಡದ ಪ್ರೋತ್ಸಾಹ ಮತ್ತು ಕೋಸ್ಟಾರ‍್ಸ್‌ಗಳ ಸಹಾಯದಿಂದ ಆ ಭಯ ದೂರವಾಯಿತು. ಒಳ್ಳೆಯ ತಂಡದಲ್ಲಿ ಕೆಲಸ ಮಾಡಿದ್ದರಿಂದಲೇ ನಾನು ಕ್ಯಾಮೆರಾ ಮುಂದೆ ಅಷ್ಟೊಂದು ಚೆನ್ನಾಗಿ ನಟಿಸಲು ಸಾಧ್ಯವಾಗಿದೆ. ಚಿತ್ರದ ಮತ್ತೊಂದು ಹೈಲೈಟ್ ಅಂದರೆ, ಅದು ಹರಿಕೃಷ್ಣ ಅವರ ಮ್ಯೂಸಿಕ್ ಮತ್ತು ಜೈ ಆನಂದ್ ಅವರ ಕ್ಯಾಮೆರಾ ಕೆಲಸ. ಈಗಾಗಲೇ ‘ಖಾಯಿಲೆ ಹಾಡು ಹಿಟ್ ಆಗಿದೆ. ನನಗೆ ಮೊದಲ ಸಿನಿಮಾ ಆಗಿರುವುದರಿಂದ, ಜನರ ತೀರ್ಪಿಗಾಗಿ ಕಾಯುತ್ತಿzನೆ. ಇನ್ನು, ದೀಪಾಸನ್ನಿಧಿ ಒಳ್ಳೆಯ ನಟಿ. ಕೆಲವೊಮ್ಮೆ ಇಬ್ಬರು ಚರ್ಚೆ ಮಾಡಿ ಕ್ಯಾಮೆರಾ ಮುಂದೆ ಬಂದು ನಿಲ್ಲುತ್ತಿದ್ದೆವು. ಅವರ ಸಹಕಾರ ಜಾಸ್ತಿ ಇದೆ. ಅನೀಶ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಧುಕೂಡ ಚೆನ್ನಾಗಿಯೇ ಮಾಡಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ಸಾಕಷ್ಟು ನಿರೀಕ್ಷೆ ಇದೆ ಎಂಬುದು ವಿವೇಕ್ ಹೇಳಿಕೆ.
ದೀಪಾಸನ್ನಿಧಿ, ಹಿಂದೆ ಮುಂದೆ ನೋಡದೆ, ಈ ಚಿತ್ರದಲ್ಲಿ ನಟಿಸಲು ಒಪ್ಪಿದರಂತೆ. ಅದಕ್ಕೆ ಇನ್ನೊಂದು ಕಾರಣ, ಆ ಚಿತ್ರದಲ್ಲಿ ಬರುವ ಅಂಜಲಿ ಎನ್ನುವ ಪಾತ್ರವಂತೆ. ಅಂಜಲಿ ಪಾತ್ರ ನೀವು ಮಾಡಬೇಕು ಅಂತ ನಿರ್ದೇಶಕ ಮಹೇಶ್‌ರಾವ್ ಹೇಳುತ್ತಿದ್ದಂತೆಯೇ ದೀಪಾಗೆ ಖುಷಿಯಾಗಿ, ಗ್ರೀನ್‌ಸಿಗ್ನಲ್ ಕೊಟ್ಟರಂತೆ. ಇನ್ನು, ಆ ಚಿತ್ರ ಎಲ್ಲರ ಮನಸ್ಸಲ್ಲೂ ಉಳಿಯುವಂಥದ್ದು ಎನ್ನುವ ದೀಪಾ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳಿವೆ. ಎಲ್ಲರಿಗೂ ಹೊಸ ಫೀಲ್ ಕೊಡುವ ಸಿನಿಮಾ ಇದಾಗಲಿದೆ. ಇನ್ನು, ನಿರ್ಮಾಪಕ ನರಸಿಂಹನ್ ಅವರು ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಇದು ಅವರ ಎರಡನೇ ಚಿತ್ರ. ನಿಜ ಹೇಳುವುದಾದರೆ, ಅವರೊಬ್ಬ ಸಿನಿಮಾ ಪ್ರೀತಿಸುವ ನಿರ್ಮಾಪಕರು. ಆ ಕಾರಣದಿಂದ ಚಿತ್ರ ರಿಚ್ ಆಗಿ ಮೂಡಿಬಂದಿದೆ. ಇನ್ನು, ನಿರ್ದೇಶಕ ಮಹೇಶ್‌ರಾವ್ ಕೂಡ ಮೂಲ ಚಿತ್ರಕ್ಕಿಂತಲೂ ಚೆನ್ನಾಗಿ ಮಾಡಿದ್ದಾರೆ ಎಂದು ವಿವರಿಸುತ್ತಾರೆ ದೀಪಾಸನ್ನಿಧಿ.
ನಿರ್ದೇಶಕ ಮಹೇಶ್‌ರಾವ್‌ಗೆ  ಈ ಹಿಂದೆ ನಿರ್ಮಾಪಕ ಕೆ.ಮಂಜು ಈ ಸಿನಿಮಾ ನಿರ್ದೇಶಿಸಬೇಕು ಅಂತ ಹೇಳಿದ್ದರಂತೆ. ಆಮೇಲೆ ಅವರಲ್ಲಿದ್ದ ಈ ಚಿತ್ರದ ಹಕ್ಕನ್ನು ನರಸಿಂಹನ್ ಪಡೆದಾಗ, ಪುನಃ ನಿರ್ದೇಶನ ಮಾಡೋಕೆ ನನಗೇ ಅವಕಾಶ ಸಿಕ್ಕಿದೆ. ಒಳ್ಳೆಯ ಬ್ಯಾನರ್‌ನಲ್ಲಿ ಒಂದೊಳ್ಳೆಯ ಸಿನಿಮಾ ನಿರ್ದೇಶಿಸಿರುವ ಖುಷಿ ನನ್ನದು ಅನ್ನುತ್ತಾರೆ ಮಹೇಶ್‌ರಾವ್. ನಿರ್ಮಾಪಕ ಎ.ನರಸಿಂಹನ್ ಅವರು ನಾನು ಕೇಳಿದ್ದನ್ನೆಲ್ಲಾ ಕೊಟ್ಟು ಒಂದೊಳ್ಳೆಯ ಚಿತ್ರ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಸಿನಿಮಾ ಎಲ್ಲರಿಗೂ ಒಳ್ಳೆಯ ಹೆಸರು ತಂದುಕೊಡುತ್ತೆ ಎಂಬ ವಿಶ್ವಾಸವಿದೆ. ಇಬ್ಬರು ನಾಯಕರು, ಇಬ್ಬರು ನಾಯಕಿಯರು ಸಿನಿಮಾದ ನಾಲ್ಕು ಪಿಲ್ಲರ್‌ಗಳಿದ್ದಂತೆ. ಹರಿಕೃಷ್ಣ ಅವರ ಆಲ್ಬಂ ಕೇಳುವ ಎಲ್ಲರಿಗೂ ಒಂದು ರೀತಿಯ ಹೊಸ ಖಾಯಿಲೆ ಅಂಟಿಕೊಳ್ಳುವುದು ಗ್ಯಾರಂಟಿ ಅನ್ನುತ್ತಾರೆ ಮಹೇಶ್‌ರಾವ್.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed